ಮೊದಲ ನೋಟದಲ್ಲೇ ಪ್ರೀತಿಗೆ ಸೋತೆ ಎಂದು ಹೇಳುವ ಹುಡುಗನ ಬಗ್ಗೆ!!
ಸೋತನೋ ಗೆದ್ದನೋ....ಇನ್ನೂ ಮಾಹಿತಿ ಬಂದಿಲ್ಲ!!
------------------------------------------------------------------------------------------
ಮನಸ್ಸೊಳಗಿನ ಎಷ್ಟೋ ಮಾತುಗಳು ಬರುತಿ ಲ್ಲಾ ಹೊರಗೆ..
ಮನಸ್ಸೊಳಗಿನ ಎಷ್ಟೋ ಮಾತುಗಳು ಬರುತಿ
ಅವುಗಳಿಗೆ ಅಲ್ಲೇ ಇರಲು ಆಸೆಯೋ ಏನೋ ತಿಳಿದಿಲ್ಲ ನನಗೆ..
ನೀ ಕೇಳದೇ..ನಾ ಹೇಳದೇ..
ಕನಸುಗಳೆಲ್ಲ ಕನಸುಗಳಾಗಿಯೇ ಉಳಿವು ದೋ ಏನೋ ಹೀಗೆ.. //ಪ //
ಕಿವಿಯ ಹಿಂಡಿ ನನ್ನ ಬುದ್ಧಿ...ಈಗ ಏನೂ ಬೇಡ ಅಂದಿದೆ ..
ಕಳ್ಳ ಮನಸು ಮೆಲ್ಲ ನಿನ್ನ...ಮತ್ತೆ ನೋಡು ಎನುತಿದೆ..
ವ್ಯಾಮೋಹ ಮೂಡಿದೆ...!
ನೋಡುತಾ ಕಾಡುವ ಕಂಗಳಾ.. ನನ್ನೋಳಗಡೆ ಯೇ ಗೊಂದಲ..
ಪ್ರೀತಿಯನೀಗ ಹೇಳಲಾ....ಪ್ರೀತಿಯನೀಗ ಹೇಳಲಾ.. / /೧ //
ಒಲವಿನಿಂದ ಬರೆದು ಪತ್ರ ...ಇಡಲು ಕಿಟಕಿಯ ಅಂಚಲಿ....
ಹಾರಿ ಹೋಗಿ ಅದು ನಿನ್ನ...ಸೇರಿದ ಸುದ್ಧಿ ತಂದಿದೆ ತಂಗಾಳಿ...
ಖುಷಿಯಾದೆನು ಕೇಳಿ...!
ಪದಗಳನು ಸಾಲ ಪಡೆದು ....ಬರೆದಿರುವ ಓಲೆ ಅದು ..
ದಯಮಾಡಿ ಒಮ್ಮೆ ಓದು ..ದಯಮಾಡಿ ಒಮ್ಮೆ ಓದು .. .// ೨ //
------------------------------------------------------------------------------------------
3 comments:
Superv yar......
And u'v prepared dis in mid 9t r8? So much patience.... Gud, keep it up....
hey nothing so...itz not @ mid 9t...
prepared @noon..
therz some problem with timings it seems!!!
Post a Comment